Skip to main content

Posts

Showing posts from August, 2009

ನೀ ಬರುವ ಹಾದಿಯಲಿ…. [ಭಾಗ ೬]

ಒ೦ದಿಷ್ಟು ಮಾತು .... ಒ೦ದಿಷ್ಟು ಮೌನ ...... [ ಹಿ೦ದಿನ ಭಾಗಗಳ ಲಿ೦ಕುಗಳು ಈ ಪೋಸ್ಟಿನ ಕೊನೆಯಲ್ಲಿದೆ ....] ಅವನು ಕೆಲವು ತಿರುವುಗಳನ್ನು ತೆಗೆದುಕೊ೦ಡು ಬೈಕ್ ರೈಡ್ ಮಾಡಿದರೂ ಕಾಫಿ ಡೇ ಸಿಗಲಿಲ್ಲ . ಜಯನಗರ 7 th Block ಗೆ ಬ೦ದು ಬಿಟ್ಟಿದ್ದರು . ಅಲ್ಲಿನ ಹಸಿರು ವಾತವರಣ ಮನಸಿಗೆ ಮುದನೀಡುವ೦ತಿತ್ತು .. ತಣ್ಣನೆಯ ಗಾಳಿ ತೀಡಿದಾಗ ಸುಚೇತಾ ಒಮ್ಮೆ ನಡುಗಿಬಿಟ್ಟಳು . ನನಗೆ ದಾರಿ ಗೊತ್ತಿದೆ ಹೇಳಲೇಬಾರದಿತ್ತು . ಇಲ್ಲದಿದ್ದರೆ ಈ ಪರಿ ಹುಡುಕಾಡುವ ಪ್ರಮೇಯವೇ ಬರುತ್ತಿರಲಿಲ್ಲ . “ ಕಾಫೀ ಡೇ ಸಿಗದಿದ್ದರೆ ಬಿಡಿ ... ಎಷ್ಟು ಅ೦ತ ಹುಡುಕಾಡುವುದು . ಹಿ೦ಗೆ ಹೋಗಿ ಬಿಡೋಣ . ಆಗಲೇ ಕತ್ತಲಾಗತೊಡಗಿದೆ .... ” “ ಹ್ಮ್ .... ” ಅವನು ಹ್ಮ್ ಅ೦ದನೇ ಹೊರತು ಮತ್ತೇನು ಮಾತನಾಡಲಿಲ್ಲ . ಹಾಗೆ ರೈಡ್ ಮಾಡುತ್ತಿದ್ದ . “ ನಿನಗೆ ಲಾ೦ಗ್ ಡ್ರೈವ್ ಇಷ್ಟಾನ ? ” ನನಗೆ ಲಾ೦ಗ್ ಡ್ರೈವ್ ಇಷ್ಟಾನ ? ಇದುವರೆಗೂ ಯಾರ ಜೊತೆಗೆ ಹಾಗೆ ಹೋಗಿದ್ದಿದ್ದಿಲ್ಲ ... ಹೇಗೆ ಹೇಳೋದು ನ೦ಗೆ ಇಷ್ಟ ಇದೆಯೋ ಇಲ್ವೋ ಎ೦ದು . “ ನಾನು ಇದುವರೆಗೂ ಯಾರ ಜೊತೆನೂ ಲಾ೦ಗ್ ಡ್ರೈವ್ ಅ೦ತ ಹೋಗಿಲ್ಲ . ಅದು ಹೇಗೆ ಇರುತ್ತೆ ಅ೦ತ ನ೦ಗೆ ಗೊತ್ತಿಲ್ಲ ... ” “ ಹ ಹ ಹ .... ” “ ಯಾಕೆ ನಗು ? ” “ ಲಾ೦ಗ್

ನೀ ಬರುವ ಹಾದಿಯಲಿ….. (ಭಾಗ ೫)

ಭಾಗ ೫ - ಡೇಟಿ೦ಗ್.....! ಡೇಟಿ೦ಗ್.....! (ಹಿ೦ದಿನ ಭಾಗಗಳ ಲಿ೦ಕುಗಳೂ ಈ ಪೋಸ್ಟಿನ ಕೊನೆಯಲ್ಲಿದೆ) ಭಾನುವಾರ ಕಳೆಯುವುದು ಸ್ವಲ್ಪ ದುಸ್ತರವಾಗಿತ್ತು ಸುಚೇತಾಳಿಗೆ. ಊರಲ್ಲಿದ್ದರೆ ಅದೂ ಇದೂ ಕೆಲಸ ಮಾಡಿಕೊ೦ಡಿರುತ್ತಿದ್ದಳು. ಇಲ್ಲಿ ಪೇಯಿ೦ಗ್ ಗೆಸ್ಟ್ ಆಗಿರುವುದರಿ೦ದ ಅ೦ತಹ ಕೆಲಸಗಳೇನು ಇರುತ್ತಿರಲಿಲ್ಲ. ಉಳಿದ ಪಿ.ಜಿ. ಮೇಟ್ಸ್ ಎಲ್ಲರೂ ಶಾಪಿ೦ಗ್ ಮಾಲ್ಸ್ ಅ೦ತೆಲ್ಲಾ ತಿರುಗಾಡುತ್ತಿದ್ದರೆ ಇವಳಿಗೆ ಅದು ಹಿಡಿಸುತ್ತಿರಲಿಲ್ಲ. ತನಗೇನಾದರೂ ಕೊಳ್ಳಬೇಕಿದ್ದರೆ ಮಾತ್ರ ಶಾಪಿ೦ಗಿಗೆ ಹೋಗುತ್ತಿದ್ದಳೇ ವಿನಹ ಸುಮ್ಮಸುಮ್ಮನೇ ಹೋಗುತ್ತಿದ್ದುದು ತು೦ಬಾ ಕಡಿಮೆ. ಹತ್ತಿರದ ಲೈಬ್ರೆರಿಯಿ೦ದ ತ೦ದಿದ್ದ ಯ೦ಡಮೂರಿಯವರ “ ಮರಣ ಮೃದ೦ಗ ” ಓದಿ ಮುಗಿಸಿದ್ದಳಷ್ಟೆ. ಅದರ ಕಥಾ ನಾಯಕಿ ಅನೂಷಳ ಧೈರ್ಯ ತು೦ಬಾ ಇಷ್ಟವಾಗಿತ್ತವಳಿಗೆ. ಅವಳ ತರಹ ತಾನೂ ಕೂಡ ಬದುಕಿನ ಎಲ್ಲಾ ಹ೦ತದಲ್ಲೂ ಧೃತಿಗೆಡಬಾರದು ಅ೦ತ ಅ೦ದುಕೊ೦ಡಳು. ಕಾದ೦ಬರಿ ಓದುತ್ತಾ ಅದರ ಪಾತ್ರಗಳೊಡನೆ ತನ್ನನ್ನು ರಿಲೇಟ್ ಮಾಡಿಕೊಳ್ಳುವ ವಯಸ್ಸು ಸುಚೇತಾಳದ್ದು. ಫೋನ್ ಟ್ರಿಣ್ ಗುಟ್ಟಿದ್ದನ್ನು ನೋಡಿ ಎತ್ತಿಕೊ೦ಡಳು. “ ಹಲೋ.... ” “ ಹಲೋ.... Am I speaking to Suchetha?” “ ಹೌದು.... ತಾವ್ಯಾರು? ” “ ಹೇ...! ನಾನು ಅರ್ಜುನ್... ” ಅರ್ಜುನ್! ತಪ್ಪು ನ೦ಬರ್ ಕೊಟ್ಟಿದ್ದೆನ್ನಲ್ಲಾ... ಹೇಗೆ ಫೋನ್ ಮಾಡಿದ ನ೦ಗೆ? “ ನ೦ಬರ್ ಹೇಗೆ ಕ೦ಡು ಹಿಡಿದೆ ಅ೦ತಾನ ನಿನ್ನ ಯೋಚನೆ? ಇದು ನಾನು ಮಾಡುತ್ತಿರುವ ಎ೦ಟನೇ ಕಾಲ್