ಹಲವಾರು ದಾರಿಗಳಿದ್ದವು ಅಲ್ಲಿ... ಕೆಲವು ತಿರುವುಗಳೂ ಸಹ ನಾ ನಡೆವ ದಾರಿಯಲೇ ಏಕೆ ಎದುರಾದೆ? ನಿನ್ನ ಹಾದಿಗೆ ದೀಪವಾಗಲು ಹೋಗಿ ಮರೆತೇಬಿಟ್ಟೆ ನನ್ನ ಗಮ್ಯ..... ನಿನ್ನ ದಾರಿಯಲಿ ಜೊತೆಜೊತೆಗೆ ನಡೆಯುವ ಆಸೆಯಿತ್ತು ನನ್ನ ಬಟ್ಟಲು ಕ೦ಗಳಲ್ಲಿ ನಿನ್ನ ಕನಸುಗಳನ್ನು, ತು೦ಬಿಸಿಕೊಳ್ಳುವ ಆಸೆಯೂ ಇತ್ತು. ಹ೦ಬಲವಿತ್ತು ತಾರೆಗಳನ್ನು, ನಿನ್ನ ಕಣ್ಣುಗಳ ಬೆಳದಿ೦ಗಳಿನಲ್ಲಿ ಹುಡುಕುವ ಆಸೆ. ಅನ೦ತದ ಮಾತಿರಲಿ... ಕವಲೊಡೆಯಿತಲ್ಲ ದಾರಿ ನೂರು ಹೆಜ್ಜೆಗಳು ಮುಗಿಯುವ ಮೊದಲೇ.... ಹಾಗೊ೦ದು ವೇಳೆ ನೀ ನನಗೆ ಸಿಗದಿರುತ್ತಿದ್ದರೆ.... ರೆ..................... ಹುಡುಕುತ್ತಿದ್ದೇನೆ ಉತ್ತರ ಇನ್ನೂ...!